News and Events

ಶಿಕ್ಷಕನು ವೃತ್ತಿಗೆ ನ್ಯಾಯ ಒದಗಿಸಿದಾಗ ಮಾತ್ರ ದೇಶದ ಅಭಿವೃದ್ಧಿ- ಎಸ್.ಕೆ.ಬಿ.ಪ್ರಸಾದ್
ಶಿಕ್ಷಕನು ವೃತ್ತಿಗೆ ನ್ಯಾಯ ಒದಗಿಸಿದಾಗ ಮಾತ್ರ ದೇಶದ ಅಭಿವೃದ್ಧಿ- ಎಸ್.ಕೆ.ಬಿ.ಪ್ರಸಾದ್

ಮಲ್ಲಾಡಿಹಳ್ಳಿ: ಶಿಕ್ಷಕನು ಉತ್ತಮ ಬೋಧನೆ ಮಾಡುತ್ತಾ ವೃತ್ತಿಗೆ ನ್ಯಾಯ

ಆಯುರ್ವೇದ ಮಹತ್ವ ಅರಿಯಿರಿ-ಡಾ|| ಎಸ್.ನಾಗರಾಜ
ಆಯುರ್ವೇದ ಮಹತ್ವ ಅರಿಯಿರಿ-ಡಾ|| ಎಸ್.ನಾಗರಾಜ

ಮಲ್ಲಾಡಿಹಳ್ಳಿ: ಇತ್ತೀಚಿನ ದಿನಗಳಲ್ಲಿ ಜನರು ಖಾಯಿಲೆಗಳಿಂದ ಹೆಚ್ಚಾಗಿ ಬಳಲುತ್ತಿದ್ದು

ಮಲ್ಲಾಡಿಹಳ್ಳಿ ಆಶ್ರಮದ ದುಮ್ಮಿ ಅರುಣೋದಯ ಪ್ರೌಢಶಾಲೆಗೆ ಶೇ.96

ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಆಶ್ರಯದಲ್ಲಿ ನಡೆಯುತ್ತಿರುವ ದುಮ್ಮಿಯ

Follow Us

ಉತ್ತಮ ಶಿಕ್ಷಕರಾಗಲು ಉತ್ತಮ ಶಿಕ್ಷಣ ಅವಶ್ಯ – ಪ್ರೊ.ಟಿ.ಎಚ್.ಕೃಷ್ಣಮೂರ್ತಿ

Tuesday, March 21st, 2017

ಮಲ್ಲಾಡಿಹಳ್ಳಿ
ಉತ್ತಮ ಶಿಕ್ಷಕರಾಗಲು ಉತ್ತಮ ಶಿಕ್ಷಣದ ಅವಶ್ಯವಿದ್ದು ಅದನ್ನು ಪಡೆಯಲು ಮಲ್ಲಾಡಿಹಳ್ಳಿ ಬಿ.ಇಡಿಯಂತಹ ಕಾಲೇಜಿಗೆ ಸೇರುವುದರಿಂದ ಉತ್ತಮ ಶಿಕ್ಷಕರಾಗಲು ಸಾಧ್ಯವಾಗುತ್ತದೆ ಎಂದು ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಹೇಳಿದರು.
ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡುತ್ತಾ ಎಲ್ಲ ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುತ್ತವೆ ಆದರೆ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶಾಲಾ ಕಾಲೇಜುಗಳು ಉತ್ತಮ ಶಿಕ್ಷಣ ನೀಡುತ್ತಿದ್ದು, ಶಿಕ್ಷಣದ ಜೊತೆಯಲ್ಲಿ ಸಂಗೀತ, ಯೋಗ ಮತ್ತು ನಾಟಕದ ಕಲೆಗಳನ್ನು ಇಲ್ಲಿ ಕಲಿಸಲಾಗುತ್ತಿದ್ದು ಮುಂದೆ ಶಿಕ್ಷಕರಾಗುವವರಿಗೆ ಇಂತಹ ಶಿಕ್ಷಣವು ಅವರ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ನೆರವಾಗುತ್ತವೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಉತ್ತಮ ಶಿಕ್ಷಣದ ವ್ಯವಸ್ಥೆಯನ್ನು ಆಡಳಿತ ಮಂಡಳಿಯ ಸಹಕಾರದಿಂದ ಮಾಡಿದ್ದು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ತಮ ಬೋಧನೆಯನ್ನು ಮಾಡಲಾಗುತ್ತಿದೆ ಎಂದರು. ಕಾಲೇಜು ಪ್ರಸಕ್ತ ಸಾಲಿನಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ನಡೆದ ಪ್ರಥಮ ವರ್ಷದ ಬಿ.ಇಡಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶವನ್ನು ಪಡೆದಿದ್ದು ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಅತ್ಯುತ್ತಮ ಹೆಸರನ್ನು ಪಡೆದುಕೊಂಡಿದೆ ಎಂದರು. ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಅಂಕಪಡೆದ ಫಿರ್ದೋಸರಾ ಖಾನಂ, ರಾಕೇಶ್ ಮತ್ತು ರೇಖಾ ಇವರುಗಳನ್ನು ಆಡಳಿತ ಮಂಡಳಿಯವರು ಮತ್ತು ಪ್ರಾಚಾರ್ಯರು ಹಾಗೂ ಸಿಬ್ಬಂದಿವರ್ಗದವರು ಅಭಿನಂದಿಸಿದರು.
ಹಿರಿಯ ಉಪನ್ಯಾಸಕರಾದ ಎನ್.ಎಸ್.ರುದ್ರೇಶ್ ನಿರೂಪಿಸಿ, ಎನ್.ಧನಂಜಯ ವಂದಿಸಿದರು. ಉಪನ್ಯಾಸಕರಾದ ಸಂತೋಷ್ ಕುಮಾರ್, ಎನ್.ಎಸ್.ಶಂಕರ್, ಮಂಜುನಾಥ್, ಗ್ರಂಥಪಾಲಕ ಪಿ.ವಿ.ಬಸವರಾಜ್ ಹಾಗೂ ವಿದ್ಯಾರ್ಥಿಗಳ ಪೋಷಕರು ಮತ್ತಿತರರು ಉಪಸ್ಥಿತರಿದ್ದರು.