News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ವಿದ್ಯಾದಾನ ಮಾಡಿದ ಸಂಸ್ಥೆಯನ್ನು ಮರೆಯದಿರಿ – ಉಪಪ್ರಾಚಾರ್ಯ ಕೆ.ಎಂ.ತಿಮ್ಮರಾಜು

Wednesday, February 22nd, 2017

ಮಲ್ಲಾಡಿಹಳ್ಳಿ
ತಾವು ಓದಿದ ಮತ್ತು ವಿದ್ಯಾದಾನ ಮಾಡಿದ ಸಂಸ್ಥೆಯನ್ನು ಎಂದಿಗೂ ಮರೆಯದಿರಿ ಎಂದು ಉಪಪ್ರಾಚಾರ್ಯ ಕೆ.ಎಂ.ತಿಮ್ಮರಾಜು ಹೇಳಿದರು. ಅವರು ಮಲ್ಲಾಡಿಹಳ್ಳಿಯ ಪ್ರೌಢಶಾಲೆಯಲ್ಲಿ 1986-88ರಲ್ಲಿ ಓದಿದ ವಿದ್ಯಾರ್ಥಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಕುರಿತು ಮಾತನಾಡುತ್ತಾ ಅತ್ಯಂತ ಬಡ ಹಾಗೂ ಹಿಂದುಳಿದ ವರ್ಗದವರ ಏಳ್ಗೆಗಾಗಿ ಶ್ರಮಿಸುತ್ತಿರುವ ಸಂಸ್ಥೆಯಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ವಿದ್ಯೆ ಮತ್ತು ವಸತಿ ಸೌಕರ್ಯವನ್ನು ಪಡೆದುಕೊಂಡು ಅದರ ಋಣವನ್ನು ತೀರಿಸುವ ಸಲುವಾಗಿ ಬಂದು ಇಂದು ಆಶ್ರಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಪ್ರೌಢಶಾಲೆಯ ಸಭಾಭವನದ ಲೈಟಿಂಗ್ ವ್ಯವಸ್ಥೆ ಮತ್ತು ಆಡಿಯೋ ವ್ಯವಸ್ಥೆಗೆ 1.5ಲಕ್ಷರೂಗಳ ಚೆಕ್ ನೀಡಿದ್ದು ಅತ್ಯಂತ ಹರ್ಷದಾಯಕ ಎಂದರು. ನಿಮ್ಮ ಈ ಹೃದಯವಂತಿಕೆ ಮುಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು ಹಾರೈಸಿದರು.
ಸಂಸ್ಥೆಗೆ ಚೆಕ್ ಹಸ್ತಾಂತರಿಸಿ ಮಾತನಾಡಿದ ಪ್ರಶಾಂತ್ ಜಿ.ಯು. ಮಾತನಾಡಿ ಅನಾಥಸೇವಾಶ್ರಮದ ಆಡಳಿತ ಮಂಡಳಿಯು ಉತ್ತಮ ಕೆಲಸ ಕಾರ್ಯಗಳು ಆಶ್ರಮದಲ್ಲಿ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಹಿರಿಯ ವಿದ್ಯಾರ್ಥಿಗಳನ್ನು ಸೇರಿಸಿ ಆಶ್ರಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಅತ್ಯಾಧುನಿಕ ಶಿಕ್ಷಣ ಸೌಲಭ್ಯಗಳನ್ನು ಒದಗಿಸಿ ರಾಘವೇಂದ್ರ ಸ್ವಾಮೀಜಿಯವರ ಕನಸನ್ನು ನನಸು ಮಾಡಲು ಶ್ರಮಿಸುವುದಾಗಿ ಹೇಳಿದರು.
ದೈಹಿಕ ಶಿಕ್ಷಣ ಕಾಲೇಜಿನ ಪ್ರಾಚಾರ್ಯ ಟಿ.ವೆಂಕಟೇಶ್, ಹಿರಿಯ ಶಿಕ್ಷಕ ಕೆ.ಆರ್.ಶಂಕರಪ್ರಸಾದ್, ಯೋಗತರಬೇತುದಾರ ಸಂತೋಷ್ ಕುಮಾರ್, ಕ್ಷೇಮಪಾಲಕರಾದ ಮಲ್ಲಪ್ಪ, ಚಂದ್ರಶೇಖರ್ ಹಿರಿಯ ವಿದ್ಯಾರ್ಥಿಗಳಾದ ಮನೋಹರ, ಲಕ್ಷ್ಮಿಕಾಂತ ಹರ್ತಿಕೋಟೆ, ಶ್ರೀನಿವಾಸ್, ಕಿರಣ್ ಮತ್ತಿತರರು ಉಪಸ್ಥಿತರಿದ್ದರು.

ಅನಾಥಸೇವಾಶ್ರಮದಲ್ಲಿ ನಿರ್ಮಿಸುತ್ತಿರುವ ಸಭಾಂಗಣಕ್ಕೆ ಹಿರಿಯ ವಿದ್ಯಾರ್ಥಿಗಳು ಉಪಪ್ರಾಚಾರ್ಯ ಕೆ.ಎಂ.ತಿಮ್ಮರಾಜುರವರಿಗೆ ರೂ.1.5ಲಕ್ಷ ಚೆಕ್ ನೀಡುತ್ತಿರುವುದು