ಮಲ್ಲಾಡಿಹಳ್ಳಿ: ವ್ಯಕ್ತಿ ಯಾವುದಾದರೊಂದು ಸಾಧನೆಯತ್ತ ಮುನ್ನುಗ್ಗಿದಾಗ ಮಾತ್ರ ವ್ಯಕ್ತಿತ್ವ
ಮಲ್ಲಾಡಿಹಳ್ಳಿ: ದಾವಣಗೆರೆ ವಿಶ್ವವಿದ್ಯಾನಿಲಯ ಮಟ್ಟದ ಬಿ.ಇಡಿ ಕಾಲೇಜುಗಳ ತೃತೀಯ
ಮಲ್ಲಾಡಿಹಳ್ಳಿ: ವ್ಯಕ್ತಿ ಯಾವುದಾದರೊಂದು ಸಾಧನೆಯತ್ತ ಮುನ್ನುಗ್ಗಿದಾಗ ಮಾತ್ರ ವ್ಯಕ್ತಿತ್ವ ನಿರ್ಮಾಣಗೊಂಡು ಉತ್ತಮ ಸಮಾಜ ಸೃಷ್ಠಿಯಾಗುತ್ತದೆಂದು ಚಿತ್ರದುರ್ಗ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಎಲ್ಲ ಶಾಲಾ ಕಾಲೇಜುಗಳ ವತಿಯಿಂದ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಶಿಸ್ತು, ಶಾಂತಿ, ಭ್ರಾತೃತ್ವ ಮುಂತಾದವುಗಳನ್ನು ರೂಢಿಸಿಕೊಂಡಾಗ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ಗಣ ಎಂದರೆ ಒಂದು ಗುಂಪು ಅವಗುಣಗಳನ್ನು ತೊಡೆದುಹಾಕಿದಾಗ ಮಾತ್ರ ನಾವೆಲ್ಲರೂ ಒಂದು ಒಳ್ಳೆಯ ಗಣವಾಗುತೇವೆ, ಒಳಿಗಿನ ಮಾನಸಿಕ ತುಮುಲಗಳೇ ನಮ್ಮ ಆಂತರಿಕ ಶತೃಗಳು, ಕಾಮ, ಕ್ರೋಧ, ಮದ, ಮತ್ಸರಗಳನ್ನು ವಿವೇಚನೆಯಿಂದ ಬಳಸಿದಾಗ ಮನುಷ್ಯ ಮನುಷತ್ವವನ್ನು ಹೊಂದುತ್ತಾನೆ ಎಂದರು. ಎಲ್ಲರೂ ಯಾವುದಾದರೊಂದು ಸಾಧನೆಯತ್ತ ಮುನ್ನೆಡೆದಾಗ ಮಾತ್ರ ಉತ್ತಮವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು. ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆಯನ್ನು ಹೊಂದಬೇಕು ಇದರಿಂದ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂಬ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ 33ವರ್ಷಗಳ ಕಾಲ ಸೇವೆ ಸೇವೆ ಸಲ್ಲಿಸಿ ವಯೋನಿವೃತ್ತಿಗೊಂಡ ಶತಮಾನೋತ್ಸವ ಬಿ.ಪಿ.ಇಡಿ ಕಾಲೇಜಿನ ಪ್ರಾಚಾರ್ಯ ಟಿ.ವೆಂಕಟೇಶ್ ಹಾಗೂ ಆಶ್ರಮದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಗೌರಮ್ಮ, ಹಾಲಮ್ಮ, ನಾಗರತ್ನಮ್ಮ, ಶಂಕ್ರಮ್ಮ ಇವರುಗಳನ್ನು ಸನ್ಮಾನಿಸಲಾಯಿತು. ಅನಾಥಸೇವಾಶ್ರಮ ವಿಶ್ವಸ್ತ ಸಮಿತಿ ಉಪಾಧ್ಯಕ್ಷರಾದ ಡಿ. ನಟರಾಜ್, ಆಡಳಿತಾಧಿಕಾರಿ ಎಚ್.ಎಸ್. ಸಿದ್ರಾಮಸ್ವಾಮಿ ಮತ್ತು ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರು, ಅಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೋವಿಡ್ ಮಾರ್ಗಸೂಚಿಯಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉಪನ್ಯಾಸಕ ಶಿವಲಿಂಗಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು.