News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಮಾನಸಿಕ ದೈಹಿಕ ಖಾಯಿಲೆಗಳಿಗೆ ಯೋಗ ದಿವ್ಯಔಷಧಿ – ಕೆ. ನಾಗರಾಜ್

Thursday, June 23rd, 2022

ಮಲ್ಲಾಡಿಹಳ್ಳಿ: ಮಾನಸಿಕ ಮತ್ತು ದೈಹಿಕ ಖಾಯಿಲೆಗಳಿಗೆ ಯೋಗವು ದಿವ್ಯ ಔಷಧಿಯಾಗಿದೆ ಎಂದು ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಉದ್ಯಮಿ ಹಾಗೂ ಅನಾಥಸೇವಾಶ್ರಮದ ವಿಶ್ವಸ್ತರಾದ ಕೆ.ನಾಗರಾಜ್ ತಿಳಿಸಿದರು. ಅವರು ಅನಾಥಸೇವಾಶ್ರಮದಲ್ಲಿ ಏರ್ಪಡಿಸಿದ್ದ 8ನೇ ಅಂತರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಪಾಲ್ಗೊಂಡು ಇಂದು ಯೋಗದಿನಾಚರಣೆಯ ಜೊತೆಗೆ ವಿಶ್ವಸಂಗೀತ ದಿನಾಚರಣೆಯೂ ನಡೆಯುತ್ತಿದ್ದು ಬದುಕಿನ ಎಲ್ಲಾ ಸಮಯದಲ್ಲಿ ಇವುಗಳ ಅವಶ್ಯಕತೆ ಇದ್ದು ಇವುಗಳ ಸತತ ಅಭ್ಯಾಸದಿಂದ ಮನುಷ್ಯ ಆರೋಗ್ಯವಂತನಾಗಿರಲು ಸಾಧ್ಯ ಎಂದರು ಬಹಳ ವರ್ಷಗಳ ಹಿಂದೆಯೇ ಮಲ್ಲಾಡಿಹಳ್ಳಿ ಶ್ರೀಗಳು ಯೋಗವನ್ನು ವಿಶ್ವಾದ್ಯಂತ ಸಾರುವ ದೃಷ್ಠಿಯಿಂದ ವಿಶ್ವಯೋಗ ಮಂದಿರವನ್ನು ಕಟ್ಟಿದ್ದು ನಮ್ಮೆಲ್ಲರ ಕಣ್ಣೇದುರೇ ಇದೆ ಎಂದರು. ವಿದ್ಯಾರ್ಥಿ ದೆಸೆಯಿಂದಲೇ ಯೋಗದ ಅಭ್ಯಾಸಗಳನ್ನು ಅನುಸರಿಸಿದಲ್ಲಿ ಭವಿಷ್ಯದಲ್ಲಿ ಆರೋಗ್ಯವಾಗಿರಲು ಸಾಧ್ಯ ಎಂದರು.

ಇನ್ನೋರ್ವ ಅತಿಥಿಯಾಗಿದ್ದ ಆಡಳಿತಾಧಿಕಾರಿ ಎಚ್.ಎಸ್.ಸಿದ್ರಾಮಸ್ವಾಮಿ ಮಾತನಾಡಿ ಯೋಗವನ್ನು ಜಗತ್ತಿಗೆ ನೀಡಿದ ಕೀರ್ತಿ ಭಾರತದ್ದು ಇದು ವೈಜ್ಞಾನಿಕವಾಗಿದ್ದು ಅದನ್ನು ನಿತ್ಯವೂ ಅನುಸರಿಸಿರಿ, ಸೂರ್ಯನಮಸ್ಕಾರದಲ್ಲಿ ಬರುವ 12 ಆಸನಗಳನ್ನು 12 ಬಾರಿ ಮಾಡುವ ಕ್ರಮಬದ್ಧ ಯೋಗಕ್ಕೆ ನೀವು ತೊಡಗಿಕೊಂಡರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಯಾವುದೇ ಖಾಯಿಲೆಗಳಿದ್ದಲ್ಲಿ ಸುಧಾರಣೆಯಾಗುತ್ತದೆ ಎಂದರು. ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ನಡೆಯುತ್ತಿರುವ ಅನಾಥಸೇವಾಶ್ರಮದಲ್ಲಿ ಯೋಗಕ್ಕೆ ಬೇಕಾದ ಎಲ್ಲಾ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಹೊಳಲ್ಕೆರೆ ತಾಲ್ಲೂಕಿನ ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ವ್ಯವಸ್ಥಾಪಕರಾದ ಮಾತೆ ಸುಮಿತ್ರಕ್ಕನವರು ಮಾತನಾಡಿ ಯೋಗಾಸನಗಳು ದೇಹಕ್ಕೆ ಎಷ್ಟು ಮುಖ್ಯವೋ, ಧ್ಯಾನವು ಮನಸ್ಸಿಗೆ ಅಷ್ಟೇ ಮುಖ್ಯವಾಗುತ್ತದೆ ಕ್ರಮಬದ್ಧತೆಯಿಂದ ಧ್ಯಾನವನ್ನು ಮಾಡಿದಾಗ ದೇಹದಲ್ಲಿ ಧನಾತ್ಮಕ ಚಿಂತನೆಗಳು ಹೆಚ್ಚಿ ಉತ್ತಮ ನಾಗರೀಕರಾಗಲು ಸಾಧ್ಯವಾಗುತ್ತದೆ ಎಂದರು.

ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ|| ಅಂಬರೀಷ್ ಮಾತನಾಡಿ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿಯವರು ನಾಲ್ಕು ಯೋಗಗಳ ಪ್ರತಿಪಾದಕರಾಗಿದ್ದು ಅವರ ತತ್ವಗಳನ್ನು ಅವರು ಮಾಡಿದ ಯೋಗ ಸಾಧನೆಯನ್ನು ನಾವೆಲ್ಲರೂ ಇಂದು ಅಳವಡಿಸಿಕೊಳ್ಳುವುದು ಸೂಕ್ತವಾದ ಸಮಯವಾಗಿದೆ ಎಂದರು. ಯೋಗ ತರಬೇತುದಾರ ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ 1500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ಸೂರ್ಯನಮಸ್ಕಾರ, ಯೌಗಿಕ ವ್ಯಾಯಾಮಗಳು ಮತ್ತು ಆಸನಗಳ ಪ್ರದರ್ಶನವನ್ನು ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂತೋಷ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು.

ಸ್ವತಂತ್ರ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಎಸ್.ಶಿವಕುಮಾರ್ ಸ್ವಾಗತಿಸಿ, ದೈಹಿಕ ಶಿಕ್ಷಣ ಉಪನ್ಯಾಸಕ ವೇಣುಗೋಪಾಲ್ ನಿರೂಪಿಸಿ, ಬಿ.ಪಿ.ಇಡಿ ಕಾಲೇಜಿನ ಪ್ರಾಚಾರ್ಯ ಟಿ.ಲೋಕೇಶಪ್ಪ ವಂದಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು, ಅಧ್ಯಾಪಕರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.