News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಯೋಗಾಸನಗಳಲ್ಲಿರುವ ವ್ಶೆಜ್ಞಾನಿಕ ಸತ್ಯಗಳನ್ನು ಅರಿತುಕೊಳ್ಳಿ-ಪ್ರೊ. ಜೆ. ರಘುನಾಥ್

Saturday, January 16th, 2016

ಯೋಗಾಸನಗಳಲ್ಲಿರುವ ವೈಜ್ಞಾನಿಕ ಸತ್ಯಗಳನ್ನು ಅರಿತುಕೊಂಡು ಯೋಗ ಮಾಡಿದಾಗ ಮಾತ್ರ ಸಂಪೂರ್ಣ ಪ್ರಯೋಜನಕಾರಿಯಾಗುತ್ತದೆ ಎಂದು ಶತಮಾನೋತ್ಸವ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ.ಜೆ.ರಘುನಾಥ್ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಸ್ವಾಮೀಜಿದ್ವಯರ ಪುಣ್ಯಾರಾಧನೆ ಯ ಅಂಗವಾಗಿ ಏರ್ಪಡಿಸಿದ್ದ ತಿರುಕನೂರಿನಲ್ಲಿ ರಂಗದಾಸೋಹದ ಯೋಗ ಶಿಬಿರದ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡುತ್ತಾ ಯೋಗಾಸನಗಳಲ್ಲಿ ವೈಜ್ಞಾನಿಕವಾಗಿ ಸತ್ಯಾಂಶಗಳನ್ನು ಹೊಂದಿದ್ದು ಯಾವುದೇ ಧರ್ಮಕ್ಕಾಗಲೀ ಜಾತಿಗಾಗಲೀ ಅಥವಾ ದೇಶಕ್ಕಾಗಲೀ ಸೀಮಿತವಾಗದೇ ಅವುಗಳ ಅಭ್ಯಾಸದಿಂದ ದೇಹದ ಗ್ರಂಥಿಗಳು ರಸವಿಶೇಷಣಗಳನ್ನು ಉತ್ಪತ್ತಿ ಮಾಡಿ ಆರೋಗ್ಯಕರವಾದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸಿದರು. ಯಾವ ಆಸನಗಳನ್ನು ಮಾಡುವುದರಿಂದ ದೇಹದ ಯಾವ ಗ್ರಂಥಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತವೆ ಸೂರ್ಯ ನಮಸ್ಕಾರ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೇಗೆ ಹೆಚ್ಚುತ್ತದೆ ಎನ್ನುವುದನ್ನು ತಿಳಿಸಿದರು

ಇನ್ನೋರ್ವ ಉಪನ್ಯಾಸಕ ಟಿ.ಲೋಕೇಶ್ ಮಾತನಾಡಿ ಹಿತವಾದ ಆಹಾರ ಶುದ್ಧ ಯೋಚನೆಗನ್ನು ಮಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಹೇಗೆ ಆರೋಗ್ಯವಂತರಾಗಬಹುದು ಎನ್ನುವುದನ್ನು ತಿಳಿಸಿದರು. ಉಪಪ್ರಾಚಾರ್ಯ ಆರ್.ಬಿ.ಹಾರೋಮಠ್ ಮಾತನಾಡಿ ವಿದ್ಯಾರ್ಥಿ ಜೀವನದಿಂದಲೇ ಉತ್ತಮ ಯೋಗಾಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದಾಗುವ ಪ್ರಯೋಜನಗಳನ್ನು ಕುರಿತಂತೆ ಮಾತನಾಡಿದರು.

ಯೋಗತರಬೇತುದಾರ ಸಂತೋಷ್ ಕುಮಾರ್ ಮಾತನಾಡಿ ಪ್ರತಿನಿತ್ಯ ಕನಿಷ್ಠ 30 ನಿಮಿಷವಾದರೂ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು ಅನಾಥಸೇವಾಶ್ರಮದಲ್ಲಿ ಏರ್ಪಡಿಸಿದ್ದ ಉಚಿತ ಪಾತಂಜಲ ಯೋಗ ಶಿಬಿರದಲ್ಲಿ ಕಲಿತ ಶಿಬಿರಾರ್ಥಿಗಳು ಜೀವನದಲ್ಲಿ ಅದನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಕುರಿತಂತೆ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಅಪರ ಜಿಲ್ಲಾಧಿಕಾರಿ ಹಾಗೂ ಅನಾಥಸೇವಾಶ್ರಮದ ಕಾರ್ಯನಿರ್ವಹಣಾಧಿಕಾರಿ ಎ.ಎಸ್.ನಿರ್ವಾಣಪ್ಪ ಮಾತನಾಡಿ ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ನಡೆಯುತ್ತಿರುವ ಸಂಸ್ಥೆಯಲ್ಲಿ ಇಂತಹ ಉತ್ತಮ ಕಾರ್ಯ ನಡೆಯಲು ಆಡಳಿತ ಮಂಡಳಿ ಎಲ್ಲ ವ್ಯವಸ್ಥೆಗಳನ್ನು ಸಮಾಜಮುಖಿಯಾಗಿ ಮಾಡಲಿದೆ ಹಾಗೂ ಮುಂಬರುವ ದಿನಗಳಲ್ಲಿ ಯೋಗಕ್ಕೆ ಸಂಬಂಧಿಸಿದ ವಿಶೇಷ ಕಾರ್ಯಗಳನ್ನು ಮಾಡಲಿದೆ ಎಂದರು.

ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಾದ ಕುಮಾರಿ ಸ್ವಾತಿ, ಮನು ಹಾಗೂ ಚಂದ್ರಶೇಖರ ಹಾದಿಮನಿ ಅನಿಸಿಕೆಗಳನ್ನು ಹೇಳಿದರು. ಯೋಗತರಬೇತುದಾರ ಸಂತೋಷ್ ಕುಮಾರ್ ಇವರನ್ನು ಆಶ್ರಮದ ವತಿಯಿಂದ ಸನ್ಮಾನಿಸಲಾಯಿತು. ರಾಘವೇಂದ್ರ ಗುರುಕುಲ ವಿದ್ಯಾಪೀಠದ ಶಿಕ್ಷಕರಾದ ರೂಪಾ ಪ್ರಾರ್ಥಿಸಿ, ದೀಪಾ ಸ್ವಾಗತಿಸಿ ಬಿ.ಪಿ.ಚಂದ್ರಶೇಖರ್ ನಿರೂಪಿಸಿ, ವೀಣಾ ವಂದಿಸಿದರು. ವಿದ್ಯಾರ್ಥಿಗಳು ಯೋಗ ಶಿಬಿರದಲ್ಲಿ ಕಲಿತ ಆಸನಗಳನ್ನು ಪ್ರದರ್ಶಿಸಿದರು.

ಫೋಟೋ :
1. ಪ್ರೊ. ಜೆ. ರಘುನಾಥ್ ಉಚಿತ ಪಾತಂಜಲ ಯೋಗ ಶಿಬಿರದಲ್ಲಿ ಮಾತನಾಡುತ್ತಿರುವುದು.

Prof. J.Raghunath Speech

2. ಯೋಗತರಬೇತುದಾರ ಸಂತೋಷ್ ಕುಮಾರ್ ಇವರನ್ನು ಉಚಿತ ಪಾತಂಜಲ ಯೋಗ ಶಿಬಿರದಲ್ಲಿ ಸನ್ಮಾನಿಸುತ್ತಿರುವುದು.

Yogatrainer Santhosh kumar receives a honour