ಸ್ವರಸುರಭಿ ಆನಂದ ಕಂದ ಗೀತೋತ್ಸವ
ರವಿವಾರ, ದಶಂಬರ 1st, 2013ದಿನಾಂಕ01.12.2013 ರ ಭಾನುವಾರ ಸಂಜೆ ಬಸವನಗುಡಿಯ ಬೀದಿ ಬೀದಿಗಳಲ್ಲಿ ಕಡ್ಲೆಕಾಯಿ ಪರೀಷೆಯ ಮೇಳ ನಡೆಯುತ್ತಿದ್ದರೆ ಮತ್ತೊಂದೆಡೆ ಕಹಳೆ ಬಂಡೆ ಉದ್ಯಾನವನದ ವೇದಿಕೆಯಲ್ಲಿ ಬೆಂಗಳೂರಿಗರಿಗೆ ಅಪರೂಪದ ಹಾಡುಗಳ ಅನುರಣನ. ಒಟ್ಟಾರೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು, ಸಂಜೆ ರಂಗೇರಿತ್ತು. ಗಾಯಕ ಶ್ರೀಧರ ಅಯ್ಯರವರ ಸ್ವರಸುರಭಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆನಂದ ಕಂದ ಗೀತೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾಂರ್ಯಕ್ರಮದಲ್ಲಿ ಸಾವಿರ ಹಾಡುಗಳ ಸರ್ದಾರ ಬಾಳಪ್ಪ ಹುಕ್ಕೇರಿ ಹಾಗೂ ಇಂದಿನ ಪೀಳಿಗೆಯ ಸುಗಮ ಸಂಗೀತ ನಿರ್ದೇಶಕ ಮೃತ್ಯುಂಜಯ […]















