3000 ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಯೋಗ ತರಬೇತಿ
ಸೋಮವಾರ, ಜೂನ್ 20th, 2016ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಎಲ್ಲ ಶಾಲಾ ಕಾಲೇಜುಗಳ ಒಟ್ಟು 3000 ವಿದ್ಯಾರ್ಥಿಗಳಿಗೆ ಜೂನ್-21ರ ಪೂರ್ವಭಾವಿಯಾಗಿ ವಿವಿಧ ಯೋಗಾಸನಗಳು ಹಾಗೂ ಸೂರ್ಯನಮಸ್ಕಾರ ಪದ್ಧತಿಯೊಂದಿಗೆ ತರಬೇತಿ ನೀಡಲಾಯಿತು. ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ರಚಿತ ಯೋಗ ಪದ್ಧತಿಯನ್ನು ಯೋಗ ತರಬೇತುದಾರ ಎಸ್.ಆರ್.ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ 12 ಆಸನಗಳು, ಸೂರ್ಯನಮಸ್ಕಾರ ಮತ್ತು ಧ್ಯಾನ ಪದ್ಧತಿಯನ್ನು 1 ಗಂಟೆಗೂ ಹೆಚ್ಚು ಸಮಯದಲ್ಲಿ ಹೇಳಿಕೊಡಲಾಯಿತು. ಇದೇ ಮಂಗಳವಾರ ಜೂನ್-21ರಂದು ನಡೆಯಲಿರುವ ವಿಶ್ವಯೋಗ ದಿನಾಚರಣೆ ಸಂದರ್ಭದಲ್ಲಿ ಇಲ್ಲಿ ಕಲಿತ ವಿದ್ಯಾರ್ಥಿಗಳಿಂದ ಪ್ರದರ್ಶನ ಏರ್ಪಡಿಸಲಾಗುವುದು. ಡಾ.ಶಿವಮೂರ್ತಿ ಮುರುಘಾಶರಣರ ಸಾನ್ನಿಧ್ಯ […]