
ಉತ್ತಮ ನಾಗರೀಕರಾಗಲು ಸಾಮಾಜಿಕ ಪ್ರಜ್ಞೆ ಅವಶ್ಯ
ಬುಧವಾರ, ಮೇ 22nd, 2013ಮಲ್ಲಾಡಿಹಳ್ಳಿ: ಉತ್ತಮ ನಾಗರೀಕರಾಗಲು ಸಾಮಾಜಿಕ ಪ್ರಜ್ಞೆ ಅವಶ್ಯ ಎಂದು ಅನಾಥಸೇವಾಶ್ರಮದ ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ ನುಡಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮ ಎಸ್.ಎಸ್.ಬಿ.ಎಸ್. ಡಿ.ಇಡಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಸಮಾಜದಲ್ಲಿ ಸಾಮಾಜಿಕ ಪ್ರಜ್ಞೆ ಕಡಿಮೆ ಇದ್ದು ಇಂತಹ ಶಿಬಿರಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದರಿಂದ ಅದು ವೃದ್ಧಿಯಾಗುತ್ತದೆ ಎಂದರು.ಇಂದಿನ ಯುವಜನತೆ ಆಧುನಿಕ ಸಂಸ್ಕೃತಿಗೆ ಮಾರು ಹೋಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ತಮ್ಮ ಜೀವನವನ್ನು ಜೊತೆಯಲ್ಲಿ ಸಮಾಜದ ಅವನತಿಗೆ ಕಾರಣವಾಗುತ್ತಿದ್ದಾರೆ. ಹಾಗೆಯೇ ಅಂದು ಒಬ್ಬ ಶಿಕ್ಷಕ ಪುರದ ಒಂದು […]