ಉತ್ತಮ ಆಲೋಚನೆಯಿಂದ ವ್ಯಕ್ತಿತ್ವ ಶ್ರೇಷ್ಠ – ಡಾ.ಶಿವಮೂರ್ತಿ ಮುರುಘಾ ಶರಣರು
Wednesday, June 21st, 2017ಮಲ್ಲಾಡಿಹಳ್ಳಿ ಉತ್ತಮ ಆಲೋಚನೆಯಿಂದ ವ್ಯಕ್ತಿತ್ವ ಶ್ರೇಷ್ಠಗೊಳ್ಳುತ್ತದೆ ಎಂದು ಪೂಜ್ಯ ಶ್ರೀ.ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಅವರು ಹೊಳಲ್ಕೆರೆ ತಾಲ್ಲೂಕಿನ ಪ್ರಸಿದ್ಧ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ 3ನೇ ಅಂತರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಯೋಗ ಪದ್ಧತಿಯನ್ನು ಆಚರಿಸುವ ಎಲ್ಲರಿಗೂ ಉತ್ತಮ ಆಲೋಚನೆಗಳು ಲಭ್ಯವಾಗುತ್ತವೆ ತನ್ಮೂಲಕ ವ್ಯಕ್ತಿತ್ವ ಶ್ರೇಷ್ಠಗೊಳ್ಳುತ್ತದೆ ಎಂದರು. ಯೋಗವು ಮನುಷ್ಯನ ಆಂತರಿಕ ವಿಕಾಸಕ್ಕೆ ದಾರಿಮಾಡಿಕೊಡುತ್ತದೆ ಒಳಮನಸ್ಸನ ನೋಡುವುದು ಯೋಗದಿಂದ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತೋರಿಸುವುದರ ಮೂಲಕ ಅರಿವನ್ನುಂಟು ಮಾಡಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತನೀಕಲ್ ಸುಧಾಕರ […]