ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ
ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ ಮಾತ್ರ ಈ ದೇಶ ಸುಭದ್ರವಾಗುತ್ತದೆ ಎಂದು ಖ್ಯಾತ ಶಿಕ್ಷಣ ತಜ್ಞ ಹಾಗೂ ಅನಾಥಸೇವಾಶ್ರಮ ವಿಶ್ವಸ್ತ ಸಮಿತಿಯ ಕಾರ್ಯದರ್ಶಿ ಪ್ರೊ.ಕೆ.ಈ.ರಾಧಾಕೃಷ್ಣ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಜಾತ್ಯಾತೀತ ಪ್ರಜ್ಞೆಯನ್ನು ಬೆಳಸಬೇಕು ನಾವು ನೋಡುವ ಪ್ರಕೃತಿಯಲ್ಲಿ ಗಿಡ-ಮರ ಗಾಳಿ ಮತ್ತು ನೀರು ಇವುಗಳಲ್ಲಿ ಜಾತಿ ವ್ಯವಸ್ಥೆ ಇಲ್ಲ ಹಾಗಾಗಿ ಪ್ರಕೃತಿ ತತ್ವದಡಿಯಲ್ಲಿ ನಾವುಗಳು ಅದನ್ನು ಪಾಲಿಸಬೇಕು […]
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ ಶಾರದಾ ರಾಮಕೃಷ್ಣ ಮಠದ ಬ್ರಹ್ಮನಿಷ್ಠಾನಂದ ಸ್ವಾಮೀಜಿ ತಿಳಿಸಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಜ್ಞಾನಮಂಟಪದಲ್ಲಿ ಏರ್ಪಡಿಸಿದ್ದ ಪದವಿಪೂರ್ವ ಕಾಲೇಜುಗಳು ಹಾಗೂ ಪ್ರೌಢಶಾಲೆಗಳ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡುತ್ತಾ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಹಜವಾಗಿ ಏಕಾಗ್ರತೆ ಹೆಚ್ಚಿರುತ್ತದೆ ಅದನ್ನು ಮತ್ತಷ್ಟು ತೀವ್ರಗೊಳಿಸಿದಾಗ ಪರೀಕ್ಷೆಗಳಲ್ಲಿ ನಿರ್ಭೀತಿಯಿಂದ ಎದುರಿಸುವ ಶಕ್ತಿ ಬರುತ್ತದೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಚಟುವಟಿಕೆಗಳನ್ನು ವಿದ್ಯಾರ್ಥಿ ಹಂತದಲ್ಲಿ ರೂಢಿಸಿಕೊಂಡಾಗ ಉತ್ತಮ ನಾಗರೀಕರಾಗಲು […]
ಮಲ್ಲಾಡಿಹಳ್ಳಿ: ಮಾನಸಿಕ ಮತ್ತು ದೈಹಿಕ ಖಾಯಿಲೆಗಳಿಗೆ ಯೋಗವು ದಿವ್ಯ ಔಷಧಿಯಾಗಿದೆ ಎಂದು ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಉದ್ಯಮಿ ಹಾಗೂ ಅನಾಥಸೇವಾಶ್ರಮದ ವಿಶ್ವಸ್ತರಾದ ಕೆ.ನಾಗರಾಜ್ ತಿಳಿಸಿದರು. ಅವರು ಅನಾಥಸೇವಾಶ್ರಮದಲ್ಲಿ ಏರ್ಪಡಿಸಿದ್ದ 8ನೇ ಅಂತರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಪಾಲ್ಗೊಂಡು ಇಂದು ಯೋಗದಿನಾಚರಣೆಯ ಜೊತೆಗೆ ವಿಶ್ವಸಂಗೀತ ದಿನಾಚರಣೆಯೂ ನಡೆಯುತ್ತಿದ್ದು ಬದುಕಿನ ಎಲ್ಲಾ ಸಮಯದಲ್ಲಿ ಇವುಗಳ ಅವಶ್ಯಕತೆ ಇದ್ದು ಇವುಗಳ ಸತತ ಅಭ್ಯಾಸದಿಂದ ಮನುಷ್ಯ ಆರೋಗ್ಯವಂತನಾಗಿರಲು ಸಾಧ್ಯ ಎಂದರು ಬಹಳ ವರ್ಷಗಳ ಹಿಂದೆಯೇ ಮಲ್ಲಾಡಿಹಳ್ಳಿ ಶ್ರೀಗಳು ಯೋಗವನ್ನು ವಿಶ್ವಾದ್ಯಂತ ಸಾರುವ ದೃಷ್ಠಿಯಿಂದ ವಿಶ್ವಯೋಗ ಮಂದಿರವನ್ನು […]
ಮಲ್ಲಾಡಿಹಳ್ಳಿ: ವ್ಯಕ್ತಿ ಯಾವುದಾದರೊಂದು ಸಾಧನೆಯತ್ತ ಮುನ್ನುಗ್ಗಿದಾಗ ಮಾತ್ರ ವ್ಯಕ್ತಿತ್ವ ನಿರ್ಮಾಣಗೊಂಡು ಉತ್ತಮ ಸಮಾಜ ಸೃಷ್ಠಿಯಾಗುತ್ತದೆಂದು ಚಿತ್ರದುರ್ಗ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಎಲ್ಲ ಶಾಲಾ ಕಾಲೇಜುಗಳ ವತಿಯಿಂದ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಶಿಸ್ತು, ಶಾಂತಿ, ಭ್ರಾತೃತ್ವ ಮುಂತಾದವುಗಳನ್ನು ರೂಢಿಸಿಕೊಂಡಾಗ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ಗಣ ಎಂದರೆ ಒಂದು ಗುಂಪು ಅವಗುಣಗಳನ್ನು ತೊಡೆದುಹಾಕಿದಾಗ ಮಾತ್ರ ನಾವೆಲ್ಲರೂ ಒಂದು ಒಳ್ಳೆಯ ಗಣವಾಗುತೇವೆ, ಒಳಿಗಿನ ಮಾನಸಿಕ ತುಮುಲಗಳೇ ನಮ್ಮ ಆಂತರಿಕ ಶತೃಗಳು, […]