News and Events

ಮಲ್ಲಾಡಿಹಳ್ಳಿ ಬಿ.ಇಡಿ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ
ಮಲ್ಲಾಡಿಹಳ್ಳಿ ಬಿ.ಇಡಿ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ

ಮಲ್ಲಾಡಿಹಳ್ಳಿ: ದಾವಣಗೆರೆ ವಿಶ್ವವಿದ್ಯಾನಿಲಯ ಮಟ್ಟದ ಬಿ.ಇಡಿ ಕಾಲೇಜುಗಳ ತೃತೀಯ

ಪಾಶ್ಚಿಮಾತ್ಯರು ಆಯುರ್ವೇದಕ್ಕೆ ಕೊಡುವ ಗೌರವ ನಾವೇಕೆ ಕೊಡುತ್ತಿಲ್ಲ?-ಎಸ್.ಪಿ ರಾಧಿಕಾ
ಪಾಶ್ಚಿಮಾತ್ಯರು ಆಯುರ್ವೇದಕ್ಕೆ ಕೊಡುವ ಗೌರವ ನಾವೇಕೆ ಕೊಡುತ್ತಿಲ್ಲ?-ಎಸ್.ಪಿ ರಾಧಿಕಾ

ಮಲ್ಲಾಡಿಹಳ್ಳಿ: ಪಾಶ್ಚಿಮಾತ್ಯರುವ ಆಯುರ್ವೇದಕ್ಕೆ ಕೊಡುವ ಗೌರವ ನಾವೇಕೆ ಕೊಡುತ್ತಿಲ್ಲ

Follow Us

Vidhyarthigala Chitta Odinatta - Prof.T.H. Krishnamurthy

Vidhyarthigala Chitta Odinatta – Prof.T.H. Krishnamurthy

Saturday, February 11th, 2017

ಮಲ್ಲಾಡಿಹಳ್ಳಿ ವಿದ್ಯಾರ್ಥಿಗಳ ಚಿತ್ತ ಓದಿನತ್ತ ಇರಬೇಕು ಎಂದು ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ವಿದ್ಯಾರ್ಥಿಗಳು ಮನಸ್ಸನ್ನು ಕೇಂದ್ರೀಕರಿಸಿಕೊಂಡು ಮುಂದೆ ಬರುವ ಪರೀಕ್ಷೆಗಳನ್ನು ಗಮನದಲ್ಲಿರಿಸಿಕೊಂಡು ವಿದ್ಯಾಭ್ಯಾಸದ ಕಡೆಗೆ ಮಹತ್ವವನ್ನು ನೀಡಿದ್ದೇ ಆದಲ್ಲಿ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂದರು. ಪ್ರಾಮಾಣಿಕ ಪ್ರಯತ್ನ ಮಾಡುವುದರಿಂದ ಕಲಿಸಿದ ಗುರುಗಳಿಗೆ ಪೋಷಕರಿಗೆ ಮತ್ತು ಸಂಸ್ಥೆಗೆ ಕೀರ್ತಿ ತರುವಂತಹ ಪ್ರಯತ್ನ ಮಾಡಬೇಕು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕಾದರೆ ವಿದ್ಯಾರ್ಥಿ ದೆಸೆಯಿಂದಲೇ […]

Malladihalliyalli 'Jalagara'na 'Jaatre'ya Sambramakke Tere

Malladihalliyalli ‘Jalagara’na ‘Jaatre’ya Sambramakke Tere

Friday, February 10th, 2017

ಮಲ್ಲಾಡಿಹಳ್ಳಿ ತಿರುಕನೂರಿನಲ್ಲಿ ರಂಗದಾಸೋಹದ ಹೆಸರಿನಲ್ಲಿ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಪೂಜ್ಯ ಶ್ರೀ ಸೂರುದಾಸ್‍ಜೀ ಯವರ ಪುಣ್ಯಾರಾಧನೆಯ ಅಂಗವಾಗಿ ನಡೆದ ನಾಟಕಗಳ ಉತ್ಸವಕ್ಕೆ ತೆರೆ ಎಳೆಯಲಾಯಿತು. ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಂದ ಅಭಿನಯಿಸಲ್ಪಟ್ಟ ನಾಟಕಗಳು ಜನರ ಸಂಭ್ರಮಕ್ಕೆ ಸಾಕ್ಷಿಯಾದವು. ಡಾ.ಶಿವಮೂರ್ತಿ ಮುರುಘಾ ಶರಣರಿಂದ ಉದ್ಘಾಟಿಸಲ್ಪಟ್ಟ ಉತ್ಸವದಲ್ಲಿ ನಾಡಿನ ಹಿರಿಯ ಸಾಹಿತಿಗಳು, ನಾಟಕಕಾರರು, ಕವಿಗಳು ಮತ್ತು ರಾಜಕೀಯ ಧುರೀಣರು ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಪಾತ್ರರಾದರು. ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿಯವರ ಉತ್ಸಾಹದ ನಿರ್ದೇಶನದಲ್ಲಿ ಜಾನಪದ ಕಲಾಮೇಳಗಳೊಂದಿಗೆ ಊರಿನಲ್ಲಿ […]

ಸಮಯ ಪಾಲನೆ ರೂಢಿಸಿಕೊಳ್ಳಿ- ಡಾ.ಶಿವಮೂರ್ತಿ ಮುರುಘಾ ಶರಣರು

ಸಮಯ ಪಾಲನೆ ರೂಢಿಸಿಕೊಳ್ಳಿ- ಡಾ.ಶಿವಮೂರ್ತಿ ಮುರುಘಾ ಶರಣರು

Thursday, January 26th, 2017

ಮಲ್ಲಾಡಿಹಳ್ಳಿ ಸಮಯ ಪಾಲನೆಯನ್ನು ರೂಢಿಸಿಕೊಳ್ಳುವುದರಿಂದ ದೇಶಕ್ಕೆ ಅಪಾರವಾದ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ವಿವಿಧ ಶಾಲಾ ಕಾಲೇಜುಗಳ ವತಿಯಿಂದ ಸಾಮೂಹಿಕವಾಗಿ ಏರ್ಪಡಿಸಿದ್ದ 68ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಸಮಯಪಾಲನೆ, ಶಿಸ್ತು, ದೇಶಾಭಿಮಾನವನ್ನು ರೂಢಿಸಿಕೊಂಡಲ್ಲಿ ದೇಶವನ್ನು ಸಮಗ್ರವಾಗಿ ಮುನ್ನೆಡೆಸಿಕೊಂಡು ಹೋಗಿ ಈ ಮೂಲಕ ಗಣರಾಜ್ಯೋತ್ಸವದ ಆಚರಣೆಯ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ತಿಳಿಸಲು ಸಾಧ್ಯವಾಗುತ್ತದೆ ಎಂದರು. ದೇಶದ ಜನರು ಕೆಲಸಗಳನ್ನು ಕರ್ತವ್ಯಗಳನ್ನು ಸಮರ್ಪಕವಾಗಿ ಮಾಡಿದಾಗ ಮಹಾತ್ಮಗಾಂಧೀಜಿ, ವಲ್ಲಭಭಾಯಿ […]

ಆಧ್ಯಾತ್ಮದ ಉನ್ನತಿಯನ್ನು ಸಾಧಿಸುವುದೇ ಯೋಗ-ಡಾ.ಶಿಮುಶ

ಆಧ್ಯಾತ್ಮದ ಉನ್ನತಿಯನ್ನು ಸಾಧಿಸುವುದೇ ಯೋಗ-ಡಾ.ಶಿಮುಶ

Tuesday, June 21st, 2016

ಮಲ್ಲಾಡಿಹಳ್ಳಿ 21-06-2016 ಆಧ್ಯಾತ್ಮದ ಉನ್ನತಿಯನ್ನು ಸಾಧಿಸುವುದೇ ಯೋಗ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಹಮ್ಮಿಕೊಂಡಿದ್ದ ವಿಶ್ವಯೋಗ ದಿನಾಚರಣೆಯಲ್ಲಿ ದಿವ್ಯಸಾನ್ನಿಧ್ಯವನ್ನು ವಹಿಸಿ ಮಾತನಾಡುತ್ತಾ ಜೀವನದಲ್ಲಿ ಏನನ್ನು ಬೇಕಾದರೂ ಸರಳವಾಗಿ ಪಡೆದುಕೊಳ್ಳಬಹುದು ಆದರೆ ಶಾಂತಿ ಮತ್ತು ನೆಮ್ಮದಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದು ಪತಂಜಲಿಯ ಅಷ್ಟಾಂಗ ಯೋಗದ ಮೂಲಕ ಸಾಧ್ಯವಾಗುತ್ತದೆ ಅದೂ ಸಹ ಇಂದಿನ ದಿನಗಳಲ್ಲಿ ಕಷ್ಟಸಾಧ್ಯವಾಗಿದ್ದು ‘ಅಷ್ಟಾಂಗ ಯೋಗ ಕಷ್ಟವೆನಿಸಿದೊಡೆ ಲಿಂಗ ಯೋಗದ ಮೂಲಕ ಮೋಕ್ಷ ಹೊಂದಿರಯ್ಯ’ ಮಾಡಿರಯ್ಯ ಎನ್ನುವ ಶರಣರ ವಾಕ್ಯದಂತೆ ಲಿಂಗ ದೀಕ್ಷೆಯು […]

ಮಲ್ಲಾಡಿಹಳ್ಳಿಯಲ್ಲಿ ಎನ್.ಸಿ.ಸಿ. ಕೆಡೆಟ್‍ಗಳ ಯೋಗ ಪ್ರದರ್ಶನ

Tuesday, June 21st, 2016

ಮಲ್ಲಾಡಿಹಳ್ಳಿ, 21-06-2016 ಮಲ್ಲಾಡಿಹಳ್ಳಿಯಲ್ಲಿ ಜೂನಿಯರ್ ಎನ್.ಸಿ.ಸಿ ಕೆಡೆಟ್‍ಗಳು ಹಾಗೂ ಸೀನಿಯರ್ ಎನ್.ಸಿ.ಸಿ ಕೆಡೆಟ್‍ಗಳು ಯೋಗ ಪ್ರದರ್ಶನ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ ಮಾತನಾಡಿ ಎನ್.ಸಿ.ಸಿ ವಿಭಾಗಗಳ 400ಕ್ಕೂ ಹೆಚ್ಚು ಕೆಡೆಟ್‍ಗಳು ಒಂದೇ ವೇದಿಕೆಯಲ್ಲಿ  ವಿಶ್ವಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ವಿವಿಧ ರೀತಿಯ ಯೋಗಾಸನಗಳ ಅಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಸದೃಡತೆಯನ್ನು ತಂದುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಸೀನಿಯರ್ ಬೆಟಾಲಿಯನ್ ಕಮಾಂಡರ್ ಎಚ್.ಟಿ.ರಮೇಶ್ ಹಾಗೂ ಜ್ಯೂನಿಯರ್ ಬೆಟಾಲಿಯನ್ ಕಮಾಂಡರ್ ಹಾರೋಮಠ್ ಹಾಗೂ ಇತರೆ ಎನ್.ಸಿ.ಸಿ […]

3000 ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಯೋಗ ತರಬೇತಿ

3000 ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಯೋಗ ತರಬೇತಿ

Monday, June 20th, 2016

ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಎಲ್ಲ ಶಾಲಾ ಕಾಲೇಜುಗಳ ಒಟ್ಟು 3000 ವಿದ್ಯಾರ್ಥಿಗಳಿಗೆ ಜೂನ್-21ರ ಪೂರ್ವಭಾವಿಯಾಗಿ ವಿವಿಧ ಯೋಗಾಸನಗಳು ಹಾಗೂ ಸೂರ್ಯನಮಸ್ಕಾರ ಪದ್ಧತಿಯೊಂದಿಗೆ ತರಬೇತಿ ನೀಡಲಾಯಿತು. ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ರಚಿತ ಯೋಗ ಪದ್ಧತಿಯನ್ನು ಯೋಗ ತರಬೇತುದಾರ ಎಸ್.ಆರ್.ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ 12 ಆಸನಗಳು, ಸೂರ್ಯನಮಸ್ಕಾರ ಮತ್ತು ಧ್ಯಾನ ಪದ್ಧತಿಯನ್ನು 1 ಗಂಟೆಗೂ ಹೆಚ್ಚು ಸಮಯದಲ್ಲಿ ಹೇಳಿಕೊಡಲಾಯಿತು. ಇದೇ ಮಂಗಳವಾರ ಜೂನ್-21ರಂದು ನಡೆಯಲಿರುವ ವಿಶ್ವಯೋಗ ದಿನಾಚರಣೆ ಸಂದರ್ಭದಲ್ಲಿ ಇಲ್ಲಿ ಕಲಿತ ವಿದ್ಯಾರ್ಥಿಗಳಿಂದ ಪ್ರದರ್ಶನ ಏರ್ಪಡಿಸಲಾಗುವುದು. ಡಾ.ಶಿವಮೂರ್ತಿ ಮುರುಘಾಶರಣರ ಸಾನ್ನಿಧ್ಯ […]

ಭಾರತದ ಸಂಸ್ಕøತಿಯ ರಾಯಭಾರಿ ವಿವೇಕಾನಂದರು-ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ

ಭಾರತದ ಸಂಸ್ಕøತಿಯ ರಾಯಭಾರಿ ವಿವೇಕಾನಂದರು-ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ

Saturday, January 30th, 2016

ಭಾರತದ ಸಂಸ್ಕøತಿಯ ರಾಯಭಾರಿ ವಿವೇಕಾನಂದರು ಎಂದು ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿವೇಕಾನಂದರು ಭಾರತದ ಸಂಸ್ಕøತಿಯನ್ನು ವಿಶ್ವಕ್ಕೆ ಸಾರಿದ ಮೊದಲಿಗರು ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಭಾರತದ ಸಂಸ್ಕøತಿಯನ್ನು ಅಂದು ಪ್ರಚಾರ ಮಾಡಿ ಇಂದಿಗೂ ಅಮೇರಿಕನ್ನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಸಿದರು ವಿವೇಕಾನಂದರು ಎಂದರು. ಭಾರತದ ಯುವಶಕ್ತಿ ಅತ್ಯಂತ ಪ್ರಬಲವಾದದ್ದು ಅದನ್ನು ಹೆಚ್ಚು ಬಳಸಿದಲ್ಲಿ ವಿಶ್ವದಲ್ಲೇ ಭಾರತ ಪ್ರಥಮಸಾಲಿನಲ್ಲಿ ನಿಲ್ಲುತ್ತದೆ ಎಂದರು. ಕಾರ್ಯಕ್ರಮದಲ್ಲಿ […]

ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಿ-ಡಾ.ಶಿ.ಮು.ಶ

Tuesday, January 26th, 2016

ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಂಡು ಉತ್ತಮ ನಾಗರೀಕರಾಗುವಂತೆ ಡಾ.ಶಿವಮೂರ್ತಿ ಮುರುಘ ಶರಣರು ತಿಳಿಸಿದರು. ಅವರು ಹೊಳಲ್ಕೆರೆ ತಾಲ್ಲೂಕು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಎಲ್ಲ ಶಾಲಾ ಕಾಲೇಜುಗಳ ವತಿಯಿಂದ ಏರ್ಪಡಿಸಿದ್ದ 67ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಉತ್ತಮ ನಾಗರೀಕರಾಗಲು ಉತ್ತಮ ಶಿಕ್ಷಣವನ್ನು ಪಡೆಯಬೇಕು ಉತ್ತಮ ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳಬೇಕು ಮುಂದೆ ಉತ್ತಮ ನಾಗರೀಕರಾಗಿ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದರು. ಅನಾಥಸೇವಾಶ್ರಮವು ಉತ್ತಮ ಶಿಕ್ಷಣ ನೀಡಲು ಪೂರಕವಾದ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದು ಇಂದು ಇಲ್ಲಿ ಓದುವ ವಿದ್ಯಾರ್ಥಿಗಳು ಉತ್ತಮ […]

ಯೋಗಾಸನಗಳಲ್ಲಿರುವ ವ್ಶೆಜ್ಞಾನಿಕ ಸತ್ಯಗಳನ್ನು ಅರಿತುಕೊಳ್ಳಿ-ಪ್ರೊ. ಜೆ. ರಘುನಾಥ್

ಯೋಗಾಸನಗಳಲ್ಲಿರುವ ವ್ಶೆಜ್ಞಾನಿಕ ಸತ್ಯಗಳನ್ನು ಅರಿತುಕೊಳ್ಳಿ-ಪ್ರೊ. ಜೆ. ರಘುನಾಥ್

Saturday, January 16th, 2016

ಯೋಗಾಸನಗಳಲ್ಲಿರುವ ವೈಜ್ಞಾನಿಕ ಸತ್ಯಗಳನ್ನು ಅರಿತುಕೊಂಡು ಯೋಗ ಮಾಡಿದಾಗ ಮಾತ್ರ ಸಂಪೂರ್ಣ ಪ್ರಯೋಜನಕಾರಿಯಾಗುತ್ತದೆ ಎಂದು ಶತಮಾನೋತ್ಸವ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ.ಜೆ.ರಘುನಾಥ್ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಸ್ವಾಮೀಜಿದ್ವಯರ ಪುಣ್ಯಾರಾಧನೆ ಯ ಅಂಗವಾಗಿ ಏರ್ಪಡಿಸಿದ್ದ ತಿರುಕನೂರಿನಲ್ಲಿ ರಂಗದಾಸೋಹದ ಯೋಗ ಶಿಬಿರದ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡುತ್ತಾ ಯೋಗಾಸನಗಳಲ್ಲಿ ವೈಜ್ಞಾನಿಕವಾಗಿ ಸತ್ಯಾಂಶಗಳನ್ನು ಹೊಂದಿದ್ದು ಯಾವುದೇ ಧರ್ಮಕ್ಕಾಗಲೀ ಜಾತಿಗಾಗಲೀ ಅಥವಾ ದೇಶಕ್ಕಾಗಲೀ ಸೀಮಿತವಾಗದೇ ಅವುಗಳ ಅಭ್ಯಾಸದಿಂದ ದೇಹದ ಗ್ರಂಥಿಗಳು ರಸವಿಶೇಷಣಗಳನ್ನು ಉತ್ಪತ್ತಿ ಮಾಡಿ ಆರೋಗ್ಯಕರವಾದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂಬುದನ್ನು […]

ನಮ್ಮೆಲ್ಲರ ಮನಸ್ಸಿನ ಪ್ರತಿಬಿಂಬ ನಾಟಕ-ಚಂದ್ರಶೇಖರ ತಾಳ್ಯ

ನಮ್ಮೆಲ್ಲರ ಮನಸ್ಸಿನ ಪ್ರತಿಬಿಂಬ ನಾಟಕ-ಚಂದ್ರಶೇಖರ ತಾಳ್ಯ

Thursday, January 14th, 2016

ಮಲ್ಲಾಡಿಹಳ್ಳಿ ನಮ್ಮೆಲ್ಲರ ಮನಸ್ಸಿನ ಪ್ರತಿಬಿಂಬವನ್ನು ನಾಟಕಗಳಲ್ಲಿ ನಾವು ಕಾಣಬಹುದು ಎಂದು ಖ್ಯಾತ ಕವಿ ಚಂದ್ರಶೇಖರ ತಾಳ್ಯ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಶ್ರೀ ಸೂರುದಾಸ್‍ಜೀ ಸ್ವಾಮೀಜಿಯವರ ಪುಣ್ಯಾರಾಧನಾ ಅಂಗವಾಗಿ ಏರ್ಪಡಿಸಿದ್ದ ತಿರುಕನೂರಿನಲ್ಲಿ ರಂಗದಾಸೋಹ ನಾಟಕಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಮನಸ್ಸಿನಲ್ಲಿರುವ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ನಾಟಕ ಒಂದು ವೇದಿಕೆಯಾಗಿದೆ ಇಂದು ಸಾಂಸ್ಕøತಿಕವಾಗಿ ಜೀವಂತವಾಗಿರಲು ನಾಟಕಗಳು ಮುಖ್ಯ ಎಂದರು. ಆದರೆ ಇಂದು ಸಾಂಸ್ಕøತಿಕ ರಾಜಕಾರಣದ ವಿಪರ್ಯಾಸವನ್ನು ಸಮಾಜದಲ್ಲಿ ಕಾಣುತ್ತಿದ್ದೇವೆ ಸಾಂಸ್ಕøತಿಕ ಜವಬ್ಧಾರಿ ಮತ್ತು ಬದ್ಧತೆ […]