News and Events

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

3000 ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಯೋಗ ತರಬೇತಿ

3000 ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಯೋಗ ತರಬೇತಿ

Monday, June 20th, 2016

ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಎಲ್ಲ ಶಾಲಾ ಕಾಲೇಜುಗಳ ಒಟ್ಟು 3000 ವಿದ್ಯಾರ್ಥಿಗಳಿಗೆ ಜೂನ್-21ರ ಪೂರ್ವಭಾವಿಯಾಗಿ ವಿವಿಧ ಯೋಗಾಸನಗಳು ಹಾಗೂ ಸೂರ್ಯನಮಸ್ಕಾರ ಪದ್ಧತಿಯೊಂದಿಗೆ ತರಬೇತಿ ನೀಡಲಾಯಿತು. ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ರಚಿತ ಯೋಗ ಪದ್ಧತಿಯನ್ನು ಯೋಗ ತರಬೇತುದಾರ ಎಸ್.ಆರ್.ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ 12 ಆಸನಗಳು, ಸೂರ್ಯನಮಸ್ಕಾರ ಮತ್ತು ಧ್ಯಾನ ಪದ್ಧತಿಯನ್ನು 1 ಗಂಟೆಗೂ ಹೆಚ್ಚು ಸಮಯದಲ್ಲಿ ಹೇಳಿಕೊಡಲಾಯಿತು. ಇದೇ ಮಂಗಳವಾರ ಜೂನ್-21ರಂದು ನಡೆಯಲಿರುವ ವಿಶ್ವಯೋಗ ದಿನಾಚರಣೆ ಸಂದರ್ಭದಲ್ಲಿ ಇಲ್ಲಿ ಕಲಿತ ವಿದ್ಯಾರ್ಥಿಗಳಿಂದ ಪ್ರದರ್ಶನ ಏರ್ಪಡಿಸಲಾಗುವುದು. ಡಾ.ಶಿವಮೂರ್ತಿ ಮುರುಘಾಶರಣರ ಸಾನ್ನಿಧ್ಯ […]

ಭಾರತದ ಸಂಸ್ಕøತಿಯ ರಾಯಭಾರಿ ವಿವೇಕಾನಂದರು-ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ

ಭಾರತದ ಸಂಸ್ಕøತಿಯ ರಾಯಭಾರಿ ವಿವೇಕಾನಂದರು-ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ

Saturday, January 30th, 2016

ಭಾರತದ ಸಂಸ್ಕøತಿಯ ರಾಯಭಾರಿ ವಿವೇಕಾನಂದರು ಎಂದು ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿವೇಕಾನಂದರು ಭಾರತದ ಸಂಸ್ಕøತಿಯನ್ನು ವಿಶ್ವಕ್ಕೆ ಸಾರಿದ ಮೊದಲಿಗರು ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಭಾರತದ ಸಂಸ್ಕøತಿಯನ್ನು ಅಂದು ಪ್ರಚಾರ ಮಾಡಿ ಇಂದಿಗೂ ಅಮೇರಿಕನ್ನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಸಿದರು ವಿವೇಕಾನಂದರು ಎಂದರು. ಭಾರತದ ಯುವಶಕ್ತಿ ಅತ್ಯಂತ ಪ್ರಬಲವಾದದ್ದು ಅದನ್ನು ಹೆಚ್ಚು ಬಳಸಿದಲ್ಲಿ ವಿಶ್ವದಲ್ಲೇ ಭಾರತ ಪ್ರಥಮಸಾಲಿನಲ್ಲಿ ನಿಲ್ಲುತ್ತದೆ ಎಂದರು. ಕಾರ್ಯಕ್ರಮದಲ್ಲಿ […]

ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಿ-ಡಾ.ಶಿ.ಮು.ಶ

Tuesday, January 26th, 2016

ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಂಡು ಉತ್ತಮ ನಾಗರೀಕರಾಗುವಂತೆ ಡಾ.ಶಿವಮೂರ್ತಿ ಮುರುಘ ಶರಣರು ತಿಳಿಸಿದರು. ಅವರು ಹೊಳಲ್ಕೆರೆ ತಾಲ್ಲೂಕು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಎಲ್ಲ ಶಾಲಾ ಕಾಲೇಜುಗಳ ವತಿಯಿಂದ ಏರ್ಪಡಿಸಿದ್ದ 67ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಉತ್ತಮ ನಾಗರೀಕರಾಗಲು ಉತ್ತಮ ಶಿಕ್ಷಣವನ್ನು ಪಡೆಯಬೇಕು ಉತ್ತಮ ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳಬೇಕು ಮುಂದೆ ಉತ್ತಮ ನಾಗರೀಕರಾಗಿ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದರು. ಅನಾಥಸೇವಾಶ್ರಮವು ಉತ್ತಮ ಶಿಕ್ಷಣ ನೀಡಲು ಪೂರಕವಾದ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದು ಇಂದು ಇಲ್ಲಿ ಓದುವ ವಿದ್ಯಾರ್ಥಿಗಳು ಉತ್ತಮ […]

ಯೋಗಾಸನಗಳಲ್ಲಿರುವ ವ್ಶೆಜ್ಞಾನಿಕ ಸತ್ಯಗಳನ್ನು ಅರಿತುಕೊಳ್ಳಿ-ಪ್ರೊ. ಜೆ. ರಘುನಾಥ್

ಯೋಗಾಸನಗಳಲ್ಲಿರುವ ವ್ಶೆಜ್ಞಾನಿಕ ಸತ್ಯಗಳನ್ನು ಅರಿತುಕೊಳ್ಳಿ-ಪ್ರೊ. ಜೆ. ರಘುನಾಥ್

Saturday, January 16th, 2016

ಯೋಗಾಸನಗಳಲ್ಲಿರುವ ವೈಜ್ಞಾನಿಕ ಸತ್ಯಗಳನ್ನು ಅರಿತುಕೊಂಡು ಯೋಗ ಮಾಡಿದಾಗ ಮಾತ್ರ ಸಂಪೂರ್ಣ ಪ್ರಯೋಜನಕಾರಿಯಾಗುತ್ತದೆ ಎಂದು ಶತಮಾನೋತ್ಸವ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ.ಜೆ.ರಘುನಾಥ್ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಸ್ವಾಮೀಜಿದ್ವಯರ ಪುಣ್ಯಾರಾಧನೆ ಯ ಅಂಗವಾಗಿ ಏರ್ಪಡಿಸಿದ್ದ ತಿರುಕನೂರಿನಲ್ಲಿ ರಂಗದಾಸೋಹದ ಯೋಗ ಶಿಬಿರದ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡುತ್ತಾ ಯೋಗಾಸನಗಳಲ್ಲಿ ವೈಜ್ಞಾನಿಕವಾಗಿ ಸತ್ಯಾಂಶಗಳನ್ನು ಹೊಂದಿದ್ದು ಯಾವುದೇ ಧರ್ಮಕ್ಕಾಗಲೀ ಜಾತಿಗಾಗಲೀ ಅಥವಾ ದೇಶಕ್ಕಾಗಲೀ ಸೀಮಿತವಾಗದೇ ಅವುಗಳ ಅಭ್ಯಾಸದಿಂದ ದೇಹದ ಗ್ರಂಥಿಗಳು ರಸವಿಶೇಷಣಗಳನ್ನು ಉತ್ಪತ್ತಿ ಮಾಡಿ ಆರೋಗ್ಯಕರವಾದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂಬುದನ್ನು […]

ನಮ್ಮೆಲ್ಲರ ಮನಸ್ಸಿನ ಪ್ರತಿಬಿಂಬ ನಾಟಕ-ಚಂದ್ರಶೇಖರ ತಾಳ್ಯ

ನಮ್ಮೆಲ್ಲರ ಮನಸ್ಸಿನ ಪ್ರತಿಬಿಂಬ ನಾಟಕ-ಚಂದ್ರಶೇಖರ ತಾಳ್ಯ

Thursday, January 14th, 2016

ಮಲ್ಲಾಡಿಹಳ್ಳಿ ನಮ್ಮೆಲ್ಲರ ಮನಸ್ಸಿನ ಪ್ರತಿಬಿಂಬವನ್ನು ನಾಟಕಗಳಲ್ಲಿ ನಾವು ಕಾಣಬಹುದು ಎಂದು ಖ್ಯಾತ ಕವಿ ಚಂದ್ರಶೇಖರ ತಾಳ್ಯ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಶ್ರೀ ಸೂರುದಾಸ್‍ಜೀ ಸ್ವಾಮೀಜಿಯವರ ಪುಣ್ಯಾರಾಧನಾ ಅಂಗವಾಗಿ ಏರ್ಪಡಿಸಿದ್ದ ತಿರುಕನೂರಿನಲ್ಲಿ ರಂಗದಾಸೋಹ ನಾಟಕಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಮನಸ್ಸಿನಲ್ಲಿರುವ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ನಾಟಕ ಒಂದು ವೇದಿಕೆಯಾಗಿದೆ ಇಂದು ಸಾಂಸ್ಕøತಿಕವಾಗಿ ಜೀವಂತವಾಗಿರಲು ನಾಟಕಗಳು ಮುಖ್ಯ ಎಂದರು. ಆದರೆ ಇಂದು ಸಾಂಸ್ಕøತಿಕ ರಾಜಕಾರಣದ ವಿಪರ್ಯಾಸವನ್ನು ಸಮಾಜದಲ್ಲಿ ಕಾಣುತ್ತಿದ್ದೇವೆ ಸಾಂಸ್ಕøತಿಕ ಜವಬ್ಧಾರಿ ಮತ್ತು ಬದ್ಧತೆ […]

ರಾಘವೇಂದ್ರ ಸ್ವಾಮೀಜಿ ನಿಜವಾದ ಅಂತರಂಗದ ಸಂತ ಬಹಿರಂಗದ ಕರ್ಮಯೋಗಿ

ರಾಘವೇಂದ್ರ ಸ್ವಾಮೀಜಿ ನಿಜವಾದ ಅಂತರಂಗದ ಸಂತ ಬಹಿರಂಗದ ಕರ್ಮಯೋಗಿ

Wednesday, January 13th, 2016

ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ ನಿಜವಾದ ಅಂತರಂಗದ ಸಂತ ಬಹಿರಂಗದ ಕರ್ಮಯೋಗಿ ಎಂದು ನಿವೃತ್ತ ಪ್ರಾಚಾರ್ಯ ಎ.ಪಿ.ನಾರಾಯಣಪ್ಪ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಶ್ರೀ ಸೂರುದಾಸ್‍ಜೀ ಸ್ವಾಮೀಜಿಯವರ ಪುಣ್ಯಾರಾಧನಾ ಅಂಗವಾಗಿ ಏರ್ಪಡಿಸಿದ್ದ ತಿರುಕನೂರಿನಲ್ಲಿ ರಂಗದಾಸೋಹ ನಾಟಕಗಳ ಉತ್ಸವದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ರಾಘವೇಂದ್ರ ಸ್ವಾಮೀಜಿ ನಿಷ್ಕಾಮ ಯೋಗಿ ಹಾಗೂ ಒಬ್ಬ ತಪಸ್ವಿಯಾಗಿದ್ದರಿಂದಲೇ ಇಂತಹ ಬೃಹತ್ ಆಶ್ರಮವನ್ನು ಕಟ್ಟಿ ಲಕ್ಷಾಂತರ ಬಡ ಮಕ್ಕಳ ಪಾಲಿನ ಸಂಜೀವಿನಿಯಾಗಿದ್ದಾರೆ ಎಂದರು. ಅವರು ಒಂದು ವಟವೃಕ್ಷವಿದ್ದಂತೆ […]

Tirukanurinalli Rangadasoha - 13

Tirukanurinalli Rangadasoha – 13

Wednesday, January 13th, 2016

ಆಧುನಿಕ ಜೀವನ ಶೈಲಿಯಿಂದ ಮನುಷ್ಯನ ಬದುಕು ಹಾಳು ಮಲ್ಲಾಡಿಹಳ್ಳಿ ಆಧುನಿಕ ಜೀವನ ಶೈಲಿಯಿಂದ ಮನುಷ್ಯನ ಬದುಕು ಹಾಳಾಗುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಅವರು ಅನಾಥಸೇವಾಶ್ರಮದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಶ್ರೀ ಸೂರುದಾಸ್‍ಜೀ ಸ್ವಾಮೀಜಿಯವರ ಪುಣ್ಯಾರಾಧನಾ ಅಂಗವಾಗಿ ಏರ್ಪಡಿಸಿದ್ದ ತಿರುಕನೂರಿನಲ್ಲಿ ರಂಗದಾಸೋಹ ನಾಟಕಗಳ ಉತ್ಸವದ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ ಕುಡಿಯುವ ನೀರು, ಉಸಿರಾಡುವ ಗಾಳಿ ಮಲೀನಗೊಂಡಿದ್ದು ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವೆ ರೋಗಗಳು ಹೆಚ್ಚಾದಂತೆ ಮಾನವ ದುರ್ಬಲನಾಗುತ್ತಿದ್ದಾನೆ. ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿಯವರು ಅನೇಕ ರೋಗಿಗಳಿಗೆ […]

Guddappa Inagurate the Yoga Camp

Guddappa Inagurate the Yoga Camp

Monday, January 11th, 2016

ಯೋಗಾಭ್ಯಾಸದಿಂದ ಸದಾ ಕ್ರಿಯಾಶೀಲತೆ-ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ ಮಲ್ಲಾಡಿಹಳ್ಳಿ ಯೋಗಾಭ್ಯಾಸದಿಂದ ಸದಾ ಕ್ರಿಯಾಶೀಲತೆ ಲಭ್ಯವಾಗುತ್ತದೆ ಎಂದು ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಟಿ.ಎಚ್.ಗುಡ್ಡಪ್ಪ ತಿಳಿಸಿದರು. ಅವರು ಅನಾಥಸೇವಾಶ್ರಮದಲ್ಲಿ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಪೂಜ್ಯ ಶ್ರೀ ಸೂರುದಾಸ್ ಜೀ ಸ್ವಾಮೀಜಿಯವರ ಪುಣ್ಯಾರಾಧನೆ ನಿಮಿತ್ತವಾಗಿ ಏರ್ಪಡಿಸಿದ್ದ ಐದು ದಿನಗಳ ಉಚಿತ ಪಾತಂಜಲ ಮೂಲಯೋಗ ಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದು ನಾವುಗಳು ಒತ್ತಡ ಜೀವನವನ್ನು ಸಾಗಿಸುತ್ತಿದ್ದು ಅನೇಕ ಮಾನಸಿಕ ರೋಗಗಳಿಂದ ಹೆಚ್ಚಾಗಿ ಬಳಲುತ್ತಿದ್ದೇವೆ ನಿತ್ಯ ಯೋಗಾಭ್ಯಾಸದಲ್ಲಿ ತೊಡಗಿಕೊಂಡಾಗ ಆರೋಗ್ಯಯುತವಾದ ಜೀವನ ಹೊಂದಲು […]

Tirukaranga festival Invitation

Tirukaranga festival Invitation

Wednesday, January 6th, 2016

   

ಜನವರಿ 12 ರಿಂದ ಮಲ್ಲಾಡಿಹಳ್ಳಿಯಲ್ಲಿ ತಿರುಕರಂಗೋತ್ಸವ

ಜನವರಿ 12 ರಿಂದ ಮಲ್ಲಾಡಿಹಳ್ಳಿಯಲ್ಲಿ ತಿರುಕರಂಗೋತ್ಸವ

Wednesday, December 30th, 2015

ಮಲ್ಲಾಡಿಹಳ್ಳಿ ರಾಜ್ಯದ ಪ್ರಸಿದ್ಧ ಅನಾಥಸೇವಾಶ್ರಮದಲ್ಲಿ ಬರುವ ಜನವರಿ 12 ರಿಂದ 14ರವರೆಗೆ ಸ್ವಾಮ್ಭಿಜಿದ್ವಯರ ಪ್ಮಣ್ಯಾರಾಧನೆ ಅಂಗವಾಗಿ 3 ದಿನಗಳ ನಾಟಕೋತ್ಸವ ನಡೆಯಲಿದೆ ಎಂದು ಪೂಜ್ಯ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ದಿನಾಂಕ : 12-01-2016ರಂದು ಕಲ್ಲಪ್ಪ ಪ್ರಜಾರ್ ನಿದೇಶನದ ವೈದೇಹಿ ಕನ್ನಡಕ್ಕೆ ಅನುವಾದಿಸಿದ ‘ಕಣ್ಕಟ್ ನಗರ ತಲೆಕೆಟ್ ರಾಜ’ ಎಂತೆನ್ನುವ ನಾಟಕ ಶ್ರೀ ರಾಘವೇಂದ್ರ ಗುರುಕುಲ ವಿದ್ಯಾಪೀಠ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಪ್ರದರ್ಶನಗೊಳ್ಳಲಿದೆ. ದಿನಾಂಕ : 13-01-2016ರಂದು ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ರಚಿಸಿದ […]