ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ
ಮಲ್ಲಾಡಿಹಳ್ಳಿ: ಶಿಕ್ಷಕನು ಉತ್ತಮ ಬೋಧನೆ ಮಾಡುತ್ತಾ ವೃತ್ತಿಗೆ ನ್ಯಾಯ ಒದಗಿಸಿದಾಗ ಮಾತ್ರ ಈ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಚಿತ್ರದುರ್ಗ ಡಯಟ್ನ ಜಿಲ್ಲಾ ಪದನಿಮಿತ್ತ ಉಪನಿರ್ದೇಶಕ ಎಸ್.ಕೆ.ಬಿ.ಪ್ರಸಾದ್ ನುಡಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಬಿ.ಇಡಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಸಂಘದ ಉದ್ಘಾಟನಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಶಿಕ್ಷಕ ವೃತ್ತಿ ಇಂದು ಅತ್ಯಂತ ಕಷ್ಟಕರವಾಗಿದೆ ವೃತ್ತಿ ನಿರ್ವಹಣೆ ಅಷ್ಟೊಂದು ಸುಲಭವಲ್ಲ ಇದಕ್ಕೆ ಬೇಕಾಗುವ ಪೂರ್ವ ತಯಾರಿ ಹಾಗೂ ತರಬೇತಿಯನ್ನು ಮಾಡಿಕೊಂಡು ಸೂಕ್ತ […]
ಮಲ್ಲಾಡಿಹಳ್ಳಿ: ಇತ್ತೀಚಿನ ದಿನಗಳಲ್ಲಿ ಜನರು ಖಾಯಿಲೆಗಳಿಂದ ಹೆಚ್ಚಾಗಿ ಬಳಲುತ್ತಿದ್ದು ಇವೆಲ್ಲವುಗಳಿಗೆ ಮೂಲ ಪರಿಹಾರ ಆಯುರ್ವೇದ ಅದನ್ನು ಜನರು ಅರಿಯಬೇಕು ಎಂದು ಪ್ರಾಂಶುಪಾಲ ಡಾ||ಎಸ್.ನಾಗರಾಜ ತಿಳಿಸಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಆಯುರ್ವೇದ ಕಾಲೇಜಿನಲ್ಲಿ ಏರ್ಪಡಿಸಿದ್ದ ಆಯುರ್ವೇದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಕರೋನಾದಂತಹ ರೋಗ ವಿಶ್ವಾದ್ಯಂತ ವ್ಯಾಪಿಸಿದ್ದು ಸಮೀಕ್ಷೆಯ ಪ್ರಕಾರ ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ಅದಕ್ಕೆ ಬಹಳ ಸರಳ ಮತ್ತು ಸುಲಭವಾಗಿ ಉಪಚರಿಸುವ ಪರಿಹಾರ ಸಿಕ್ಕಿದೆ ಆದರೆ ನಮ್ಮ ಭಾರತೀಯರಿಗೆ ಆಯುರ್ವೇದ ಔಷಧ ನಿಧಾನ ಎಂಬುದು […]
ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಆಶ್ರಯದಲ್ಲಿ ನಡೆಯುತ್ತಿರುವ ದುಮ್ಮಿಯ ಅರುಣೋದಯ ಪ್ರೌಢಶಾಲೆಗೆ ಶೇ.96 ಫಲಿತಾಂಶ ದೊರೆತಿದೆ ಕನ್ನಡ ಮಾಧ್ಯಮದಲ್ಲಿ ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದ ಶಂಕರಮೂರ್ತಿ 581 ಅಂಕಗಳಿಸಿರುತ್ತಾನೆ ಎಂದು ವ್ಯವಸ್ಥಾಪಕ ಎಚ್.ಎಸ್.ಸಿದ್ರಾಮಸ್ವಾಮಿ ತಿಳಿಸಿದರು. ಇದೇ ಸಂದರ್ಭದಲ್ಲಿ ಮಲ್ಲಾಡಿಹಳ್ಳಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಫಲಿತಾಂಶ ಶೇ.69 ಬಂದಿದ್ದು ಆಂಗ್ಲ ಮಾಧ್ಯಮದ ಆದಿತ್ಯ ಗಣಾಚಾರಿ 602 ಅಂಕಗಳಿಸಿ, ಜಮುನಾ ಮತ್ತು ಐಶ್ವರ್ಯ 596 ಕ್ರಮವಾಗಿ ದ್ವಿತೀಯ ಸ್ಥಾನಗಳಿಸಿದ್ದಾರೆ. ಶ್ರೀ ರಾಘವೇಂದ್ರ ಗುರುಕುಲ ವಿದ್ಯಾಪೀಠ ಪ್ರೌಢಶಾಲೆಯ ಫಲಿತಾಂಶವು ಶೇ.60 ಬಂದಿರುತ್ತದೆ. […]
ಮಲ್ಲಾಡಿಹಳ್ಳಿ: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಆಯುರ್ವೇದ ಕಾಲೇಜಿನಿಂದ ಅಂತರಾಷ್ಟ್ರೀಯ ವೆಬಿನಾರ್ ಕಾರ್ಯಾಗಾರದ ಮೂಲಕ “ವೈರಲ್ ಡಿಸೀಜಸ್ ಮತ್ತು ಆಯುರ್ವೇದದ ಮೇಲ್ವಿಚಾರಣೆ” ಕುರಿತಂತೆ 3 ದಿನಗಳ ಅಂತರಾಷ್ಟ್ರೀಯ ಆನ್ಲೈನ್ ಕಾರ್ಯಾಗಾರವನ್ನು ಪೂಜ್ಯ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಿ ಮಾತನಾಡುತ್ತಾ ನಾಲ್ಕು ವೇದಗಳನ್ನು ಕುರಿತು ಭಾರತೀಯರು ಶತಮಾನಗಳಿಂದ ಅನುಸರಿಸುತ್ತಾ, ಆಚರಿಸುತ್ತಾ ಬಂದಿದ್ದಾರೆ ಅದರಂತೆ ಆಯುರ್ವೇದದ ಕುರಿತು ಸಂಶೋಧನೆ ನಡೆಸಿ ಎಲ್ಲ ಚಿಕಿತ್ಸೆಗಳಿಗೆ ಆಯುರ್ವೇದವೇ ಪರಿಹಾರವಾಗಿದೆ ಎಂದರು. ಪ್ರಸ್ತುತ ಬಂದಿರುವ ಕರೋನಾದಂತಹ ಕಾಯಿಲೆಗೂ […]
ಮಲ್ಲಾಡಿಹಳ್ಳಿ: ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ದ್ವಿತೀಯ ಹಾಗೂ ಚತುರ್ಥ ಸೆಮಿಸ್ಟರ್ನ ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶ ಪಡೆದು ಸಂಸ್ಥೆಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್ ಹೇಳಿದರು. ದ್ವಿತೀಯ ವರ್ಷದ ಚತುರ್ಥ ಸೆಮಿಸ್ಟರ್ನಲ್ಲಿ ಗೋಪಿ 538 ಅಂಕಗಳೊಂದಿಗೆ ಶೇ. 90ಗಳಿಸಿ ಪ್ರಥಮ ಸ್ಥಾನ ಪಡೆದರೆ ಚಿತ್ರಲೇಖ ಮತ್ತು ದಿವ್ಯಾ 89ಶೇ ದೊಂದಿಗೆ ದ್ವಿತೀಯ ಸ್ಥಾನ ಪಡೆದರು. ಶಬನಮ್ ಪರ್ವೀನ್ ತೃತೀಯ ಸ್ಥಾನ ಪಡೆದರು. ಪ್ರಥಮ ವರ್ಷದ ದ್ವಿತೀಯ […]
ರಂಗಭೂಮಿಯಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ರಂಗ ನಿರ್ದೇಶಕಿ ಶೀಲಾ ಹಾಲ್ಕುರಿಕೆ ಹೇಳಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಜ್ಞಾನಮಂಟಪದಲ್ಲಿ ನಡೆದ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿಯವರ 22ನೇ ಹಾಗೂ ಪೂಜ್ಯ ಶ್ರೀ ಸೂರುದಾಸ್ ಜೀ ಸ್ವಾಮೀಜಿಯವರ 20ನೇ ಪುಣ್ಯಾರಾಧನೆ ಅಂಗವಾಗಿ ಏರ್ಪಡಿಸಿದ್ದ ತಿರುಕನೂರಿನಲ್ಲಿ ದಾಸೋಹ ಕಾರ್ಯಕ್ರಮದ 3ನೇ ದಿನದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಒಂದು ಮಗು ರಂಗಭೂಮಿ, ರಂಗಚಟುವಟಿಕೆಯಲ್ಲಿ ತೊಡಗಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು, ರಂಗಭೂಮಿಯಲ್ಲಿ ಮನುಷ್ಯನ ವಿಕಾಸಕ್ಕೆ ಬೇಕಾದ ಎಲ್ಲ […]
ಮಲ್ಲಾಡಿಹಳ್ಳಿ ಮಲ್ಲಾಡಿಹಳ್ಳಿ ಇಂದು ರಂಗಭೂಮಿಯಾಗಿದೆ ಎಂದು ಪ್ರಸಿದ್ಧ ರಂಗನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ಹೇಳಿದರು. ಅವರು ಮಲ್ಲಾಡಿಹಳ್ಳಿಯಲ್ಲಿ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿಯವರ 22ನೇ ಹಾಗೂ ಸೂರುದಾಸ್ಜೀ ಸ್ವಾಮೀಜಿಯವರ 20ನೇ ಪುಣ್ಯಾರಾಧನೆ ಅಂಗವಾಗಿ ಏರ್ಪಡಿಸಿದ್ದ ತಿರುಕರಂಗ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಾ ಮಲ್ಲಾಡಿಹಳ್ಳಿಯು ಒಂದು ಕಾಲದಲ್ಲಿ ಯೋಗಭೂಮಿಯಾಗಿ, ಕರ್ಮಭೂಮಿಯಾಗಿ, ಜ್ಞಾನಭೂಮಿಯಾಗಿ ಇಂದು ರಂಗಭೂಮಿಯಾಗಿ ಸಮಾಜದಲ್ಲಿ ಹೊಸತನವನ್ನು ಮೈಗೂಡಿಸಿಕೊಂಡಿದ್ದು ಇಂದಿನ ವಿಶ್ವಸ್ತ ಸಮಿತಿಯ ಅಧ್ಯಕ್ಷ ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಮುಂದುವರೆಯುತ್ತಿರುವುದು ಸಂತಸದಾಯಕವಾದ ಸಂಗತಿಯಾಗಿದೆ ಧರ್ಮದ ಜೊತೆಗೆ ಸಂಸ್ಕøತಿ ಬೆರೆತಾಗ ಇವೆಲ್ಲವುಗಳು […]
ಅಭಿನವ ಧನ್ವಂತರಿ, ವ್ಯಾಯಾಮ ಮೇಷ್ಟ್ರು, ತಿರುಕನಾಮಾಂಕಿತ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿಯವರ 22ನೇ ಹಾಗೂ ಪೂಜ್ಯ ಶ್ರೀ ಸೂರುದಾಸ್ಜಿ ಸ್ವಾಮೀಜಿಯವರ 20ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಊರಿನ ಬೀದಿಗಳಲ್ಲಿ ವೀರಗಾಸೆ, ನಂದಿಕೋಲು, ಡೊಳ್ಳು ಮುಂತಾದ ಜಾನಪದ ಕಲಾ ತಂಡಗಳೊಂದಿಗೆ ಅದ್ಧೂರಿಯಾಗಿ ಭಾವಚಿತ್ರಗಳ ಮೆರವಣಿಗೆಯನ್ನು ಮಲ್ಲಾಡಿಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಏರ್ಪಡಿಸಲಾಗಿತ್ತು. 3000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮಲ್ಲಾಡಿಹಳ್ಳಿ ಹಾಗೂ ಸುತ್ತಮುತ್ತಲಿನ ನಾಗರೀಕರು, ಆಶ್ರಮದ ಎಲ್ಲ ಶಾಲಾ ಕಾಲೇಜುಗಳ ಮುಖ್ಯಸ್ಥರು, ಅಧ್ಯಾಪಕರುಗಳು ಪಾಲ್ಗೊಂಡು ಮೆರವಣಿಗೆಯ ಯಶಸ್ಸಿಗೆ ಭಾಜನರಾದರು. ಅಭಿನವ ಧನ್ವಂತರಿ, […]
ಮಲ್ಲಾಡಿಹಳ್ಳಿ ಯೋಗ, ಶಿಕ್ಷಣ ಮತ್ತು ಆಯುರ್ವೇದಕ್ಕೆ ಅತ್ಯಂತ ಹೆಚ್ಚು ಹೆಸರುವಾಸಿಯಾದ ಪ್ರಸಿದ್ಧ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಬಿ.ಇಡಿ ಕಾಲೇಜಿನ ಪ್ರಥಮ ಸೆಮಿಸ್ಟರ್ನ ಫಲಿತಾಂಶ ಬಂದಿದ್ದು ಶೇ.98 ಫಲಿತಾಂಶದೊಂದಿಗೆ ಉತ್ತಮ ಸ್ಥಾನ ಪಡೆದಿದೆ. ಎಂದು ಕಾಲೇಜಿನ ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್ ಹೇಳಿದರು. ಈಗಾಗಲೇ ಪ್ರಥಮ ವರ್ಷದ ಬಿ.ಇಡಿ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಕಾಲೇಜು ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಆಡಳಿತ ಮಂಡಳಿ ಒದಗಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಫಲಿತಾಂಶ ಲಭ್ಯವಾಗಿದೆ ಎಂದರು. ಕುಮಾರಿ ರೇಷ್ಮಾಭಾನು 513 ಅಂಕದೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡರು. […]